ಸುಳ್ಯ: ಸುಳ್ಯ ಬಂಟರ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಮಾ 20 ರಂದು ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳೆಯರಿಗೆ ಯೆನೆಪೋಯ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಪತ್ತೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಲ್ಲಿಕಾ ಪಕ್ಕಳ ಧಾರ್ಮಿಕ ಪರಿಷತ್ ಸದಸ್ಯೆ ಉದ್ಘಾಟಿಸಿ ಶುಭ ಹಾರೈಸಿದರು.
ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಆರ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗುಣವತಿ ಕೊಲ್ಲOತಡ್ಕ, ಸವಿತಾ ಗಿರೀಶ್, ರೂಪಶ್ರೀ ಜೆ ರೈ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಶೆಟ್ಟಿ, ಶ್ರದ್ಧಾ ಎಲ್ ರೈ, ಉಷಾ ಬಿ ರೈ ಪಾಜಪಳ್ಳ ಹಾಗೂ ಯೆನೆಪೋಯ ಮಹಿಳಾ ಕ್ಲಿನಿಕ್ ನ ವೈದ್ಯಾಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸುಳ್ಯ ತಾಲ್ಲೂಕಿನ ಮಹಿಳಾ ಸಾಧಕರನ್ನು, ಸಂಘಟನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.