ಸುಳ್ಯ: ಗಾಂಧಿನಗರ ಜುಮ್ಮಾ ಮಸೀದಿಯಲ್ಲಿ ಪ್ರತೀ ವರ್ಷ ನಡೆಸುತ್ತಿರುವ ರಂಜಾನ್ 17 ರಂದು ನಡೆಯುವ ಬದರ್ ಸ್ಮರಣೆ ಮತ್ತು ಪ್ರಾರ್ಥನಾ ಸಂಗಮ ಕಾರ್ಯಕ್ರಮ ಮಾ.28 ರಂದು ನಡೆಯಿತು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಯವರ ನೇತೃತ್ವ ದಲ್ಲಿ ಬದರ್ ಮೌಲೂದ್ ಪಾರಾಯಣ, ಯಾಸೀನ್, ದುವಾ ಸಂಗಮ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ, ಬೃಹತ್ ಇಫ್ತಾರ್ ಸಂಗಮ ಏರ್ಪಡಿಸಲಾಗಿತ್ತು. ನೂರಾರು ಜನರು ಉಪಸ್ಥಿತರಿದ್ದರು.