Press ID & Credential Portal
Apply / Verify  ➔
Stories
Press ID
Login
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೊನ್ನಾಳಿಯಲ್ಲಿ 50ನೇ ವರ್ಷದ ಹಿಂದೂ ಮಹಾಸಭಾ ಗೌರಿ ಗಣೇಶೋತ್ಸವ

ಭಾನುವಾರ ಗಣೇಶ ಮೂರ್ತಿ ವಿಸರ್ಜನೆ; ಶನಿವಾರ ಬೈಕ್news_1790955258_0_238.webp

ರ್‍ಯಾಲಿ 

ಹೊನ್ನಾಳಿ: ಹಿಂದೂ ಮಹಾಸಭಾ ಗೌರಿ ಗಣೇಶ ಸಮಿತಿಯ ವತಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭಾನುವಾರ ಶ್ರೀ ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎಂ.ಆರ್. ಮಹೇಶ್ ಮನವಿ ಮಾಡಿದ್ದಾರೆ.

ಶನಿವಾರ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಕರೆ ನೀಡಿದೆ.

ಬೆಳಗ್ಗೆ 11ರಿಂದ ಶೋಭಾಯಾತ್ರೆ

ಭಾನುವಾರ ಬೆಳಗ್ಗೆ 11 ಗಂಟೆಗೆ ಶ್ರೀ ಹಳದಮ್ಮ ದೇವಿ ದೇವಸ್ಥಾನದಿಂದ ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಆರಂಭವಾಗಲಿದೆ. ನಂತರ ಕೆನರಾ ಬ್ಯಾಂಕ್ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್, ಹಿರೇಕಲ್ಮಠ ಸರ್ಕಲ್ ಮಾರ್ಗವಾಗಿ ಸಾಗಲಿದೆ.

ಬಳಿಕ ಶೋಭಾಯಾತ್ರೆಯು ಶ್ರೀ ತುಂಗಾಭದ್ರ ನದಿ ತಲುಪಿದ ನಂತರ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಚಂಡೆ ಮೇಳ, ಹಲಗೆ, ಸಾಂಸ್ಕೃತಿಕ ಕಾರ್ಯಕ್ರಮ

ವಿನಾಯಕನ ಶೋಭಾಯಾತ್ರೆಯಲ್ಲಿ ಚಂಡೆ ಮೇಳ, ಹಲಗೆ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನ ಇರಲಿದ್ದು, ರಾಜಬೀದಿಗಳಲ್ಲಿ ಮೆರವಣಿಗೆ ಸಂಭ್ರಮದಿಂದ ಸಾಗಲಿದೆ.

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸರ್ವ ಭಕ್ತಾದಿಗಳಿಗೆ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಎಂ.ಆರ್. ಮಹೇಶ್, ಉಪಾಧ್ಯಕ್ಷ ವಿನಯ ವಗ್ಗರ್, ಕಾರ್ಯದರ್ಶಿ ಹರ್ಷ, ಗೌರವಾಧ್ಯಕ್ಷ ಗುರುಪಾದಯ್ಯ ಮಠದ್, ಮಂಜುನಾಥ್, ನಾಗರಾಜ್ ಬಾಡಿ ಬಿಲ್ಡರ್, ಸಿದ್ದು ಸ್ವಾಮಿ, ಪೇಟೆ ಪ್ರಶಾಂತ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ವರದಿ : ಪ್ರಭು ಹೊನ್ನಾಳಿ.

Author
B News Kannada
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬದುಕಿನುದ್ದಕ್ಕೂ ಸಂಕಷ್ಟಗಳೇ…ಬದುಕು ಬದಲಾಯಿಸಿದ ಲೇಖನಕನ್ನಡ ಕಸ್ತೂರಿ ಅಸ್ಮಿತೆಮದನ ಬಾವಿ ಸರ್ಕಾರಿ ಗೋಶಾಲೆಯ ದುರವಸ್ಥೆ ಖಂಡಿಸಿ ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ  ಜನಪ್ರಿಯಧಾರವಾಡದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇ-ಕೆವೈಸಿಗೆ ₹50 ಅಕ್ರಮ ವಸೂಲಿ ಆರೋಪ: ದೊಡ್ಡೇರಿ ನ್ಯಾಯಬೆಲೆ ಅಂಗಡಿಗೆ ನೋಟಿಸ್ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಯಾದ ​ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತುಜೇವರ್ಗಿ–ಯಡ್ರಾಮಿ ಭಾಗದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಚರ್ಚೆ: ಗಂಗಯ್ಯ ಗುತ್ತೇದಾರ್ ಹೆಸರು ಮುಂಚೂಣಿಯಲ್ಲಿಕನ್ನಡವೇ ನಮ್ಮ ಉಸಿರು, ಕನ್ನಡ ನಾಡೇ ನಮ್ಮ ಹೆಮ್ಮೆ!