ರಾಜ್ಯೋತ್ಸವ : ಸಾಧಕರಿಗೆ ಪ್ರಶಸ್ತಿ ಪ್ರದಾನ
ಧಾರವಾಡ: ಚೇತನ ಫೌಂಡೇಶನ ವತಿಯಿಂದ ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಹಾಗೂ ಆರ್ಯಭಟ ಎಜ್ಯುಕೇಶನ್ ಅಕಾಡೆಮಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ
ಕೆ.ಸಿ.ಪಾರ್ಕ ಹತ್ತಿರದ ಮುಖ್ಯಪ್ರಾಣ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಕನ್ನಡ ನಾಡು-ನುಡಿ ವಿಷಯ ಬಂದಾಗ ಕನ್ನಡಿಗರ ಸ್ವಾಭಿಮಾನ ತಾಳಬೇಕು. ಭಾಷೆ ಅಳಿದರೆ ಇಡೀ ಸಂಸ್ಕೃತಿಯೇ ಅಳಿದಂತೆ. ಹೀಗಾಗಿ ಕನ್ನಡ ಭಾಷೆ ಉಳಿದರೆ ಮಾತ್ರವೇ ಈ ಭಾಗದ ಸಂಸ್ಕೃತಿ-ಪರಂಪರೆ ಕೂಡ ಮುನ್ನಡೆಯುತ್ತದೆ. ಹೀಗಾಗಿ ಕನ್ನಡ ನಾಡು-ನುಡಿ ವಿಷಯ ಬಂದಾಗ ಕನ್ನಡಿಗರು ಗಟ್ಟಿ ಧ್ವನಿಯಾಗಬೇಕು ಎಂದರು.
ಕನ್ನಡ ನಾಡು-ನುಡಿಗಾಗಿ ಶ್ರಮಿಸುವ ಕಾಯಕ ಜೀವಿಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಚಂದ್ರಶೇಖರ ಮಾಡಲಗೇರಿ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜಕ್ಕೆ ಒಳಿತು ಮಾಡುವ ಮನಸ್ಸುಗಳ ಬೆಸೆಯುವ, ಗೌರವಿಸುವ ಕಾರ್ಯ ನಿಜಕ್ಕೂ ಮಾದರಿ. ಈ ಕಾರ್ಯ ನಿರಂತವಾಗಿ ಸಾಗಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸದಸ್ಯ ವೈ.ಎಚ್.ಬಣವಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ವೃತ್ತಿಯಿಂದಲೇ ಮಕ್ಕಳಲ್ಲಿ ಅಕ್ಷರದ ಅರವಿನೊಂದಿಗೆ ಭಾಷೆಯ ಅಡಿಪಾಯ ಹಾಕುವ ಕಾರ್ಯವಾಗಿದೆ. ಹೀಗಾಗಿ ಶಿಕ್ಷಕರು ಕನ್ನಡ ಭಾಷೆ ಉಳಿಸುವ ಕಾರ್ಯದಲ್ಲಿ ಸದಾ ತೊಡಗಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಜಿ.ದಾನಪ್ಪಗೌಡ್ರ ಮಾತನಾಡಿ, ಆಂಗ್ಲ ವ್ಯಾಮೋಹ ಪೋಷಕರಿಗೆ ಒಳ್ಳೆಯದಲ್ಲ. ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದರು.
ಉಪ್ಪಿನಬೆಟಗೇರಿಯ ವಿಕ್ರಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ದೀಪಾ ಶಿರೂರ ಮಾತನಾಡಿ, ಮಾತೃ ಭಾಷೆಗೆ ಆದ್ಯತೆ ಕೊಡುವ ಮೂಲಕ ಮಕ್ಕಳಲ್ಲಿ ಕನ್ನಡ ಸಂಸ್ಕೃತಿ ಮೂಡುವಂತೆ ಮಾಡಬೇಕು. ಅದರಲ್ಲೂ ಮಕ್ಕಳಲ್ಲಿ ಭಾಷಾ ಸಂಸ್ಕೃತಿಯ ಅಡಿಪಾಯ ಹಾಕುವ ಕಾರ್ಯವಂತಹ ಮಹಿಳೆಯರ ಕಾರ್ಯ ಅನನ್ಯ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ದಾವಣಗೆರೆಯ ಜಿಲ್ಲಾಧ್ಯಕ್ಷ ಡಾ.ಗದಿಗೆಪ್ಪ ಮ್ಯಾಚರ್, ಕವಿಯಿತ್ರಿ ಶಾರದಾ ಬಡಿಗೇರ, ದಾವಣಗೆರೆಯ ಡಾ.ನಿರ್ಮಲಾ ಹಳ್ಳಿ ಮಾತನಾಡಿದರು. ಚೇತನ ಫೌಂಡೇಶನ್ ಅಧ್ಯಕ್ಷ ಡಾ.ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
50 ಸಾಧಕರಿಗೆ ರಾಜ್ಯೋತ್ಸವ : ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹೆಸರಿನಲ್ಲಿ ಕೊಡ ಮಾಡುವ ಪಾಪು ಧೀಮಂತ ಕನ್ನಡಿಗ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದ ಸೇವೆ ಪರಿಗಣಿಸಿ ಉದಯವಾಣಿ ವರದಿಗಾರ ಶಶಿಧರ ಬುದ್ನಿ, ಪತ್ರಕರ್ತರಾದ ಉಪ್ಪಿನಬೆಟಗೇರಿಯ ಶಿವಪ್ರಭು ಈಸರಗೊಂಡ ಹಾಗೂ ದಾವಣಗೆರೆಯ ಅವರಿಗೆ ಪ್ರದಾನ ಮಾಡಲಾಯಿತು. ಉಪ್ಪಿನಬೆಟಗೇರಿಯ ಎಸ್ ಜಿವಿ ಹೈಸ್ಕೂಲಿನ ಸಹಶಿಕ್ಷಕರಾದ ರಾಮಲಿಂಗಪ್ಪ ಮಡ್ಡಿಕಾರ, ಮೈಲಾರಪ್ಪ ಕಲ್ಯಾಣಿ ಒಳಗೊಂಡಂತೆ ಸ್ನೇಹಾ ಜೀರಿಗಾಳ್, ಪ್ರೊ.ಪ್ರಕಾಶ ಎನ್ ಸುಣಗಾರ, ರವೀಂದ್ರ ಭಟ್, ವಿಶ್ವನಾಥ ರೆಡ್ಡಿ, ಲೋಕಣ್ಣ ಹುರಕಡ್ಲಿ, ಡಾ.ಚರಂತಯ್ಯ ಗುರೂಜಿ, ಶಶೀಲ ಅಡಗಲ್, ಶಾರದಾ ಬಡಿಗೇರ, ರಾಮಪ್ಪ ಎಂ.ಡಿ., ಕವಿತಾ ಹತ್ತಿಗುಡ್ಡ, ಭೀಮಸೇನ ಕಾಂಬಳೆ, ಮಂಜುನಾಥ ಜೆ.ಆರ್., ಜ್ಯೋತಿ ಆಚಾರ್ಯ, ರಶ್ಮಿ ದಂದೂರ, ನಿರ್ಮಲಾ ಹಳ್ಳಿ, ರಂಜಿತ ಎಸ್.ವಿ., ದೀಪಾ ಬೋರಟ್ಟಿ, ಮಹ್ಮದರಫೀಕ್ ಅಬ್ದುಲ್ ಗನಿ ಫಾರೂಖಿ, ಹುಚ್ಚಪ್ಪ ನಿಂಗಪ್ಪ ನಾಯನೇಗಲಿ, ರತ್ನವ್ವ ರಂಗಣ್ಣವರ, ಡಾ.ಎಂ.ಧರ್ಮನಗೌಡ, ಪುಷ್ಟ ಮಜ್ಜಿಗೆ, ಸುರೇಶ ಹೆಚ್.ಎಂ., ಮನೋಹರ ಎಚ್. ವಾಲಗದ, ಅಲ್ತಾಪ್ ನದಾಫ್ ಅವರಿಗೆ ಗಂಧದಗುಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನು ಬಸವರಾಜ ಎಸ್ ಬಾನರ್, ರೇವಣಪ್ಪ ಆರ್., ಡಾ.ಗದಿಗೆಪ್ಪ ಮ್ಯಾಚರ್, ರುದ್ರೇಶ ಬಿ., ರವಿ ಪಿ., ಹನುಮರಡ್ಡೇರ ಟಿ.ಎಚ್., ವಾಹೀದಾಬೇಗಂ, ಡಾ.ಸುರಯಾ ಎಂ.ನದಾಫ್, ಪ್ರಮೀಳಾದೇವಿ ಶಿವಪ್ಪ ಬ್ಯಾಳಿ, ವಿಜಯಾ ಸುಭಾಷ ಜಕರೆಡ್ಡಿ, ಪರವೀನತಾಜ್ ನಬೀಸಾಬ, ಅಲ್ಲಾಬಿ ಅಬ್ದುಲ್ ಗನಿ ಫಾರೂಖಿ, ರಾಜರಾಜೇಶ್ವರಿ ಮ್ಯಾಗೇರಿ, ಅಕ್ಕಮಹಾದೇವಿ ಮುನೇನಕೊಪ್ಪ, ದ್ರಾಕ್ಷಾಯಣಿ ಹಿರೇಮಠ, ಗೌರಮ್ಮ ಕಮತರ, ಶಕುಂತಲಾ ಬಂಡಿ, ಪುಂಡಲೀಕಪ್ಪ ಹುಗ್ಗಿ ಅವರಿಗೆ ಶಿಕ್ಷಣಸಿರಿ ಕನ್ನಡ ರಾಜ್ಯೋತ್ಸವ ಹಾಗೂ ರತ್ನಾ ಐರಸಂಗ, ಶಹನಾಜಬೇಗಂ ಮಹ್ಮದಗೌಸ ನೆಗಳೂರ ಅವರಿಗೆ ಆರ್ಯಭಟ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭಾಗ್ಯಶ್ರೀ ರಜಪೂತ, ಸಿರಿಗನ್ನಡ ಫೌಂಡೇಶನ ಅಧ್ಯಕ್ಷ ರಾಜೇಂದ್ರಕುಮಾರ ಮಠ, ಅಪೂರ್ವ ಜಕ್ಕಪ್ಪನವರ, ಸುವರ್ಣಾ ಲಿಗಾಡೆ, ಕೃಷ್ಣಾ ದೇವಾಂಗಮಠ, ರವೀಂದ್ರ ಕುಂಬಾರ, ಪೂರ್ಣಿಮಾ ಕುಂಬಾರ, ಕೀರ್ತಿ ಮಠಪತಿ, ಸಂಗೀತಾ ಮಠಪತಿ, ಪೂರ್ಣಿಮಾ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ವಿದ್ಯಾ ದೇವಗಿರಿ ಪ್ರಾರ್ಥಿಸಿದರು. ದ್ರಾಕ್ಷಾಯಣಿ ಹಿರೇಮಠ ನಿರೂಪಿಸಿದರು ಅಪೂರ್ವ ಆರ್ . ಜೆ ವಂದಿಸಿದರು.
