
ಭಾರತೀಯ ಶಾಸ್ತಿçÃಯ ಸಂಗೀತದಲ್ಲಿ ಸಿತಾರವು ಅತ್ಯಂತ
ಜನಪ್ರಿಯ, ಮಧುರ ತಂತಿವಾದ್ಯ : ಪಂ.ಕೈವಲ್ಯಕುಮಾರ
ಗುರವ
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ
ಜನಪ್ರಿಯ, ಮಧುರ ತಂತಿವಾದ್ಯವಾಗಿದ್ದು, 13ನೇ ಶತಮಾನದಲ್ಲಿ
ಪ್ರಸಿದ್ಧ ಸೂಫಿಸಂತ, ಗಾಯಕ ಅಮೀರ ಖುಸ್ರೋ ಅವರು ಸಿತಾರ
ವಾದ್ಯವನ್ನು ಆವೀಷ್ಕರಿಸಿದರು, ಮುಂದೆ 16 ಮತ್ತು 17ನೇ ಶತಮಾನದಲ್ಲಿ
ಮೊಘಲ್ ಸಾಮಾಜ್ಯದ ಅವಧಿಯಲ್ಲಿ ಮತಷ್ಟು ವಿಕಸನಗೊಂಡಿತು. 18ನೇ
ಶತಮಾನದಲ್ಲಿ ಆಧುನಿಕ ಶೈಲಿಯ ಸಿತಾರ ರೂಪತಾಳಿದೆ ಎಂದು ಹಿರಿಯ
ಹಿಂದೂಸ್ತಾನಿ ಗಾಯಕ ಪಂ.ಕೈವಲ್ಯಕುಮಾರ ಗುರವ ಹೇಳಿದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಇನ್ಫೋಸಿಸ್
ಫೌಂಡೇಶನ್ ಹಾಗೂ ಇನ್ಫೋಸಿಸ್ ಲಿ. ಹುಬ್ಬಳ್ಳಿ ಕ್ಯಾಂಪಸ್ ಸಹಯೋಗದಲ್ಲಿ
ಭಾರತೀಯ ಶಾಸ್ತಿçÃಯ ಸಂಗೀತ ಪರಂಪರೆಯನ್ನು ಉಳಿಸಿ,
ಪ್ರೋತ್ಸಾಹಿಸುವ ಉದ್ದೇಶದಿಂದ ದಿನಾಂಕ: 01.11.2026 ರಂದು ಧಾರವಾಡದ
ಡಾ.ದ.ರಾ.ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ “ಸಿತಾರ ಕಾರ್ಯಾಗಾರ” ವನ್ನು
ಉದ್ಘಾಟಿಸಿದ ಪಂ.ಕೈವಲ್ಯಕುಮಾರ ಗುರವ ಅವರು ಮಾತನಾಡುತ್ತ
ಸಿತಾರ ಎನ್ನುವುದು ಪರ್ಶಿಯನ್ ಭಾಷೆಯಿಂದ ಬಂದ ಹೆಸರು, ಆರಂಭದಲ್ಲಿ
ಕೇವಲ ಮೂರು ತಂತಿಯಿAದ ರೂಪಗೊಂಡAತಹ ಸಿತಾರ ವಾದ್ಯವು,
ಆವೀಷ್ಕಾರಗೊಳ್ಳುತ್ತ ಏಳು ತಂತಿಯವರೆಗೆ ಬಂದು ನಿಂತು ತನ್ನ
ಮಾಧರ‍್ಯವನ್ನು ವಿಸ್ತಾರಗೊಳಿಸಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಿತಾರ ಪರಂಪರೆಯನ್ನು
ಹುಟ್ಟುಹಾಕಿದ್ದು, ಇಂಧೋರಿನಿAದ ಧಾರವಾಡಕ್ಕೆ ಬಂದು ನೆಲೆಸಿದ್ದ ಉಸ್ತಾದ್
ರಹಿಮತ್‌ಖಾನ್ ಅವರು, ಮೈಸೂರಿನ ಅರಸರ ಆಸ್ಥಾನದಲ್ಲಿ ಸಿತಾರ ನುಡಿಸಲು
ಧಾರವಾಡದ ಮೇಲೆ ಮೇಲಿಂದ ಮೇಲೆ ಹಾದು ಹೋಗುತ್ತಿದ್ದ ಅವರು,
ಧಾರವಾಡದ ಮೇಲೆ ಮನಸೋತು ಧಾರವಾಡದಲ್ಲೆ ನೆಲೆನಿಂತು ಏಳು
ತಲೆಮಾರಿನಿಂದಲೂ ಸಿತಾರ ಪರಂಪರೆಯನ್ನು ಮುಂದುವರೆಸುವ
ಮೂಲಕ ತಮ್ಮದೇ ಆದ ಧಾರವಾಡ ಘರಾಣೆಯನ್ನು ಸ್ಥಾಪಿಸಿ, ವಾದ್ಯ
ಸಂಗೀತದಲ್ಲಿ ಸಿತಾರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದಾರೆ ಎಂದರು.
ದೇಶಕಂಡ ಪ್ರಖ್ಯಾತ ಸಿತಾರ ಕಲಾವಿದರಾದ ಪದ್ಮಶ್ರೀ
ಪುರಸ್ಕೃತ ಉಸ್ತಾದ್ ಶಾಹೀದ ಪರ್ವೇಜ್ ಅವರ ಗರಡಿಯಲ್ಲಿ ಪರಿಣತಿಗೊಂಡ
ಶಾಕೀರ್ ಖಾನ್ ಅವರು ಧಾರವಾಡಕ್ಕೆ ಬಂದು ಇಲ್ಲಿನ ಉದಯೋನ್ಮುಖ ಸಿತಾರ
ಕಲಾವಿದರಿಗೆ ಸಿತಾರನ ವಿವಿಧ ಆಯಾಮಗಳ ಬಗ್ಗೆ ಕಾರ್ಯಾಗಾರ
ನಡೆಸಿಕೊಡುತ್ತಿರುವುದು ಅತ್ಯಂತ ಸಂತೋಷ, ಈ ಕಾರ್ಯಕ್ಕೆ ಶಾಕೀರ
ಖಾನ್ ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪುಣೆಯ ಶಾಕೀರ ಖಾನ್ ಮಾತನಾಡುತ್ತ
ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಧಾರವಾಡಕ್ಕೆ ತನ್ನದೇ ಆದ
ವೈಶಿಷ್ಯತೆಯನ್ನು ಹೊಂದಿದೆ. ಈ ಪುಣ್ಯಭೂಮಿಯ ವೇದಿಕೆಯಲ್ಲಿ
ಕಾರ್ಯಕ್ರಮ ನೀಡಲು ಬಹಳ ಹೆಮ್ಮೆ ಎನಿಸುತ್ತದೆ ಎಂದರು.
ರವಿ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು.
ಹಿರಿಯ ತಾಂತ್ರಿಕ ವ್ಯವಸ್ಥಾಪಕರಾದ ಶಿವಾನಂದ ಕೂಡ್ಲಮಠ ಪ್ರಾಸ್ತಾವಿಕ
ಮಾತನಾಡಿದರು. ರಾಘವೇಂದ್ರ ನಾಕೋಡ ವಂದಿಸಿದರು.
ಪುಣೆಯ ಖ್ಯಾತ ಸಿತಾರ ವಾದಕ ಶಾಕೀರ್ ಖಾನ್ ಅವರು ಸಿತಾರ
ಕಾರ್ಯಾಗಾರದಲ್ಲಿ ರಿಯಾಜ್‌ನಲ್ಲಿ ಪರಿಣತಿಯ ತಂತ್ರಗಳು, ವಾದನದಲ್ಲಿ
ವೇಗ, ಸ್ಪಷ್ಟತೆ ಮತ್ತು ನಿಖರತೆ ಬೆಳೆಸಿಕೊಳ್ಳುವುದು, ರಾಗಗಳÀ
ವಿಸ್ತಾರ ಮತ್ತು ವಿವರವಾದ ಪರಿಚಯವನ್ನು ತಮ್ಮ ಸಿತಾರ ವಾದನ
ಪ್ರಸ್ತುತಿಯೊಂದಿಗೆ ತಿಳಿಸಿಕೊಟ್ಟರು. ತಬಲಾದಲ್ಲಿ ಬೆಂಗಳೂರಿನ
ಪಂ.ರಾಜೇAದ್ರ ನಾಕೋಡ ಹಾಗೂ ರಘುನಂದನಗೋಪಾಲ ಹೂಗಾರ
ಸಾಥ್ ಸಂಗತ ನೀಡಿದರು.