Press ID & Credential Portal
Apply / Verify  ➔
Stories
Press ID
Login
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Davanagere | Districts Gadag

ಕನ್ನಡ ಕಸ್ತೂರಿ ಅಸ್ಮಿತೆ

ಶ್ರೀಮತಿ.ಸಂಗೀತಾ ಪ್ರಕಾಶ್

news_1793772576_0_545.webp


*ಕನ್ನಡ ಕಸ್ತೂರಿ ಅಸ್ಮಿತೆ*

ನವೆಂಬರ್ ಮೊದಲ ದಿನದಂದು
ಶ್ರೀ ಭುವನೇಶ್ವರಿಯ ಪೂಜೆಯನು ಗೈದು,
ನಲಿದಾಡುವರು ಕನ್ನಡಿಗರೆಲ್ಲೆಡೆ,
ವಿವಿಧೆಡೆ ಹಳದಿ-ಕೆಂಪಿನ ಧ್ವಜವು
ಮುಗಿಲನು ಚುಂಬಿಸುತಿರಲು,
ಕವಿತೆ ಗೀತೆಗಳೆಲ್ಲೆಡೆ ಮೊಳಗಿ
ಹಬ್ಬದ ಕಳೆ ತರಲು...

ಕನ್ನಡ - ಅದು ಕೇವಲ ಭಾಷೆಯಲ್ಲ,
ಸಂಸ್ಕೃತಿ, ಭಾವಪರಂಪರೆ!
ಪ್ರಾಚೀನ ದ್ರಾವಿಡ ಮೂಲದ ಭಾಷೆಯು,
ಎರಡು ಸಾವಿರ ವರುಷಗಳ ಹಳೆಯದು,
ಧರೆಗೆ ಶಾಸ್ತ್ರೀಯತೆಯ ಮುದ್ರೆಯೊತ್ತಿದ ನುಡಿಯಿದು,
ಅರಸು ನುಡಿ, ಅಕ್ಷರಗಳೊಳಗೆ ಕಂಗೊಳಿಪುದು ಅಸ್ಮಿತೆ!

ಹಳೆಗನ್ನಡದ ಸೊಗಸಿನಲಿ,
ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡು,
ಲಲಿತ ಕವಿರಾಜಮಾರ್ಗದ, ಹಲ್ಮಿಡಿ ಶಾಸನದ,
ನೆಲದ ಸಿರಿ, ಪಂಪನ ಕೃತಿಗಳ,
ಚೆಲುವ ರನ್ನನ ಗದಾಯುದ್ಧದ,
ಬಳಕೆಯೊಳು ವಿಹರಿಸುವ
ಗಂಭೀರ ಪದಬಂಧಗಳ ಸೊಬಗಿನ ನುಡಿಯಿದು!

ಜನನಿ ಕನ್ನಡ ಧರಣಿ ದೇವಿಯ
ಮನದಿ ಹರಸಿ, ಮಧುರ ವಾಣಿಯ
ಮನವ ತಣಿಸುವ ಕನ್ನಡ ಕಸ್ತೂರಿಯ
ಪರಿಮಳದ ಸವಿನುಡಿಯು,
ಅನಿತುಕಾಲದ ಚರಿತೆಯನು ಪಡೆದ
ಅನುಪಮದ ರಾಜಗಾಂಭೀರ್ಯ ಭಾಷೆಯ,
ನೆನಹೊಳೆವ ಜ್ಞಾನಪೀಠ ಮುಕುಟದ
ಭವ್ಯ ಹಿರಿಮೆಯ ಕೃತಿಯು!

ವಾತಾಪಿ ಚಾಲುಕ್ಯರು ಮೆರೆದಿಹ
ಕನ್ನಡದ ಬಾವುಟವು,
ಬಸವಾದಿ ಶಿವಶರಣರ ವಚನ,
ದಾಸರ, ಜನಪದ ಗೀತೆಗಳ,
ಕವಿನುಡಿ ಕೋಗಿಲೆಯಂದದಿ ಮಧುರ
ವಾಣಿಯ ಕಾವ್ಯಗಳ,
ಹಲ್ಮಿಡಿ ಶಾಸನದಿಂದ ಇಂದಿನವರೆಗೆ
ಜೇನಿನ ಹೊಳೆಯಂತೆ ಜುಳುಜುಳು ಹರಿಯುತ್ತಿರುವ
ಕನ್ನಡದ ಸಂಸ್ಕೃತಿ ಸುಧಾರಸ - ಅವಿಚ್ಛಿನ್ನ!
***************
ಶ್ರೀಮತಿ.ಸಂಗೀತಾ ಪ್ರಕಾಶ್.
ಡಾವಣಗೇರಿ.

Author
B News Kannada
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬದುಕಿನುದ್ದಕ್ಕೂ ಸಂಕಷ್ಟಗಳೇ…ಬದುಕು ಬದಲಾಯಿಸಿದ ಲೇಖನಕನ್ನಡ ಕಸ್ತೂರಿ ಅಸ್ಮಿತೆಮದನ ಬಾವಿ ಸರ್ಕಾರಿ ಗೋಶಾಲೆಯ ದುರವಸ್ಥೆ ಖಂಡಿಸಿ ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ  ಜನಪ್ರಿಯಧಾರವಾಡದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇ-ಕೆವೈಸಿಗೆ ₹50 ಅಕ್ರಮ ವಸೂಲಿ ಆರೋಪ: ದೊಡ್ಡೇರಿ ನ್ಯಾಯಬೆಲೆ ಅಂಗಡಿಗೆ ನೋಟಿಸ್ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಯಾದ ​ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತುಜೇವರ್ಗಿ–ಯಡ್ರಾಮಿ ಭಾಗದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಚರ್ಚೆ: ಗಂಗಯ್ಯ ಗುತ್ತೇದಾರ್ ಹೆಸರು ಮುಂಚೂಣಿಯಲ್ಲಿಕನ್ನಡವೇ ನಮ್ಮ ಉಸಿರು, ಕನ್ನಡ ನಾಡೇ ನಮ್ಮ ಹೆಮ್ಮೆ!