Press ID & Credential Portal
Apply / Verify  ➔
Stories
Press ID
Login
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Davanagere

ದಾವಣಗೆರೆ: ಗ್ರಾಮಗಳಿಗೆ ಭೇಟಿ ನೀಡಿ ಮಹಿಳೆಯರು, ಮಕ್ಕಳಿಗೆ ಅಕ್ಕಪಡೆಯಿಂದ ಕಾನೂನು ಜಾಗೃತಿ

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಅರಿವು

news_1793297153_0_709.webp

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಅಕ್ಕಪಡೆಯ ವತಿಯಿಂದ ಇಂದು ದಾವಣಗೆರೆ ತಾಲ್ಲೂಕಿನ ಕೈದಾಳೆ, ಗಿರಿಯಾಪುರ, ಕಲ್ಕೇರಿ ಹಾಗೂ ವಡ್ಡನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಕಾನೂನು ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಗ್ರಾಮಗಳಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಅಗತ್ಯ ಸಹಾಯವಾಣಿಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು, ದೇವದಾಸಿ ಪದ್ಧತಿಯ ನಿರ್ಮೂಲನೆ, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪೋಕ್ಸೋ (POCSO) ಕಾಯ್ದೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.

ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಆರೋಗ್ಯ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆಯೂ ತಿಳಿವಳಿಕೆ ನೀಡಲಾಯಿತು. ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂಬ ಸಂದೇಶವನ್ನು ನೀಡಲಾಯಿತು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಕಾನೂನುಗಳ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಕಪಡೆಯ ಈ ಜಾಗೃತಿ ಕಾರ್ಯಕ್ರಮ ಮಹತ್ವದ್ದಾಗಿದೆ. ಗ್ರಾಮೀಣ ಪ್ರದೇಶದ ಜನರು ಸಮಸ್ಯೆ ಎದುರಾದಾಗ ಮೌನವಾಗಿರದೆ ಸೂಕ್ತ ಸಹಾಯ ಪಡೆಯಬೇಕು ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು ಎಂಬುದೇ ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.

ವರದಿ : ಮಂಜುನಾಥ್ ಗ್ರಾಮಾಂತರ ವರದಿಗಾರರು 

#ಅಕ್ಕಪಡೆ #Akkapade #DavanagerePolice #ದಾವಣಗೆರೆ #ಮಹಿಳಾಸುರಕ್ಷತೆ #ಮಕ್ಕಳಹಕ್ಕುಗಳು #ಕಾನೂನುಜಾಗೃತಿ

Author
B News Kannada
Ajjayya G
Editor | Badavara News Kannada Weekly Newspaper
B News Kannada Digital Media

Ajjayya G is associated with Kannada journalism and digital media, focusing on public-interest reporting, local news, social issues, government initiatives, and community awareness. Through his media work, he aims to highlight the concerns of ordinary people, bring public issues to light, and promote awareness through responsible journalism.

Editorial Tagline: Our Voice Against Injustice.

Website: www.bnewskannada.com
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬದುಕಿನುದ್ದಕ್ಕೂ ಸಂಕಷ್ಟಗಳೇ…ಬದುಕು ಬದಲಾಯಿಸಿದ ಲೇಖನಕನ್ನಡ ಕಸ್ತೂರಿ ಅಸ್ಮಿತೆಮದನ ಬಾವಿ ಸರ್ಕಾರಿ ಗೋಶಾಲೆಯ ದುರವಸ್ಥೆ ಖಂಡಿಸಿ ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ  ಜನಪ್ರಿಯಧಾರವಾಡದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇ-ಕೆವೈಸಿಗೆ ₹50 ಅಕ್ರಮ ವಸೂಲಿ ಆರೋಪ: ದೊಡ್ಡೇರಿ ನ್ಯಾಯಬೆಲೆ ಅಂಗಡಿಗೆ ನೋಟಿಸ್ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಯಾದ ​ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತುಜೇವರ್ಗಿ–ಯಡ್ರಾಮಿ ಭಾಗದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಚರ್ಚೆ: ಗಂಗಯ್ಯ ಗುತ್ತೇದಾರ್ ಹೆಸರು ಮುಂಚೂಣಿಯಲ್ಲಿಕನ್ನಡವೇ ನಮ್ಮ ಉಸಿರು, ಕನ್ನಡ ನಾಡೇ ನಮ್ಮ ಹೆಮ್ಮೆ!