Press ID & Credential Portal
Apply / Verify  ➔
Stories
Press ID
Login
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Dharwad

ಪತ್ರಕರ್ತ ಶಶಿಧರ ಬುದ್ನಿಗೆ ಪಾಪು ಧೀಮಂತ ಕನ್ನಡಿಗ ಪ್ರಶಸ್ತಿ

ಧಾರವಾಡದ ಹೆಮ್ಮೆ ಮಗನಿಗೆ ಒಲಿದ ಪ್ರಶಸ್ತಿ

ಧಾರವಾಡ : ಚೇತನ ಫೌಂಡೇಶನ್ ವತಿಯಿಂದ ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಹಾಗೂ ಆರ್ಯಭಟ ಎಜ್ಯುಕೇಶನ್ ಅಕಾಡೆಮಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.1 ರಂದು ಮಧ್ಯಾಹ್ನ 2:00 ಗಂಟೆಗೆ ನಗರದ ಕೆ.ಸಿ.ಪಾರ್ಕ ಹತ್ತಿರದ ಮುಖ್ಯಪ್ರಾಣ ಸಭಾಂಗಣದಲ್ಲಿ ನಡೆಯಲಿದೆ.

ಮಾಜಿ ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸದಸ್ಯ ವೈ.ಎಚ್. ಬಣವಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಜಿ. ದಾನಪ್ಪಗೌಡ್ರ, ಉಪ್ಪಿನಬೆಟಗೇರಿಯ ವಿಕ್ರಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ದೀಪಾ ಶಿರೂರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ದಾವಣಗೆರೆಯ ಜಿಲ್ಲಾಧ್ಯಕ್ಷ ಡಾ.ಗದಿಗೆಪ್ಪ ಮ್ಯಾಚರ್, ಕವಿಯಿತ್ರಿ ಶಾರದಾ ಬಡಿಗೇರ, ದಾವಣಗೆರೆಯ ಡಾ. ನಿರ್ಮಲಾ ಹಳ್ಳಿ ಆಗಮಿಸಲಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ ಆಶಯ ನುಡಿಗಳನ್ನಾಡಲಿದ್ದು, ಚೇತನ ಫೌಂಡೇಶನ್ ಅಧ್ಯಕ್ಷ ಡಾ. ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಉಪಾಧ್ಯಕ್ಷೆ ಭಾಗ್ಯಶ್ರೀ ರಜಪೂತ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಾಧಕರಿಗೆ ರಾಜ್ಯೋತ್ಸವ;
ಈ ಕಾರ್ಯಕ್ರಮದಲ್ಲಿ 50 ಜನ ಸಾಧಕರಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ಶಿಕ್ಷಣ ಸಿರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧಕರಿಗೆ ಆರ್ಯಭಟ ರಾಜ್ಯೋತ್ಸವ ಪ್ರಶಸ್ತಿ, ಸಾಧಕರಿಗೆ ಗಂಧದಗುಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಧೀಮಂತ ಕನ್ನಡಿಗ ಪ್ರಶಸ್ತಿ ಪ್ರದಾನ ನೆರವೇರಲಿದೆ.

ಪತ್ರಕರ್ತರಿಗೆ ಪಾಪು ಧೀಮಂತ ಕನ್ನಡಿಗ ಪ್ರಶಸ್ತಿ;
ಪತ್ರಿಕಾ ರಂಗದಲ್ಲಿ ಸಲ್ಲಿಸಿರುವ ಸೇವೆಯ ಸಾಧನೆ ಪರಿಗಣಿಸಿ ಪತ್ರಿಕೋದ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತರಾದ ಉಪ್ಪಿನಬೆಟಗೇರಿಯ ಶಶಿಧರ ಬುದ್ನಿ, ಶಿವಪ್ರಭು ಈಸರಗೊಂಡ ಹಾಗೂ ದಾವಣಗೆರೆಯ ಪ್ರಸನ್ನ ಎಂ ಅವರಿಗೆ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಧೀಮಂತ ಕನ್ನಡಿಗ ಪ್ರಶಸ್ತಿ ಒಲಿದು ಬಂದಿದ್ದು, ಈ ಪ್ರಶಸ್ತಿ ಪ್ರದಾನವೂ ನೆರವೇರಲಿದೆ‌.

ಗಂಧದಗುಡಿ ಕನ್ನಡ ರಾಜ್ಯೋತ್ಸವ ಪುರಸ್ಕೃತರು;
ಉಪ್ಪಿನಬೆಟಗೇರಿಯ ಎಸ್ ಜಿವಿ ಹೈಸ್ಕೂಲಿನ ಸಹಶಿಕ್ಷಕರಾದ
ರಾಮಲಿಂಗಪ್ಪ ಮಡ್ಡಿಕಾರ, ಮೈಲಾರಪ್ಪ ಕಲ್ಯಾಣಿ ಒಳಗೊಂಡಂತೆ ಪ್ರೊ.ಪ್ರಕಾಶ ಎನ್ ಸುಣಗಾರ, ರವೀಂದ್ರ ಭಟ್, ವಿಶ್ವನಾಥ ರೆಡ್ಡಿ, ಲೋಕಣ್ಣ ಹುರಕಡ್ಲಿ, ಡಾ.ಚರಂತಯ್ಯ ಗುರೂಜಿ, ಶಶೀಲ ಅಡಗಲ್, ಶಾರದಾ ಬಡಿಗೇರ, ರಾಮಪ್ಪ ಎಂ.ಡಿ., ಕವಿತಾ ಹತ್ತಿಗುಡ್ಡ, ಭೀಮಸೇನ ಕಾಂಬಳೆ, ಮಂಜುನಾಥ ಜೆ.ಆರ್., ಜ್ಯೋತಿ ಆಚಾರ್ಯ, ರಶ್ಮಿ ದಂದೂರ, ನಿರ್ಮಲಾ ಹಳ್ಳಿ, ರಂಜಿತ ಎಸ್.ವಿ., ದೀಪಾ ಬೋರಟ್ಟಿ, ಮಹ್ಮದರಫೀಕ್ ಅಬ್ದುಲ್ ಗನಿ‌ ಫಾರೂಖಿ, ಹುಚ್ಚಪ್ಪ ನಿಂಗಪ್ಪ ನಾಯನೇಗಲಿ, ರತ್ನವ್ವ ರಂಗಣ್ಣವರ, ಡಾ.ಎಂ.ಧರ್ಮನಗೌಡ, ಪುಷ್ಟ ಮಜ್ಜಿಗೆ, ಸ್ನೇಹಾ ಜೀರಿಗಾಳ್, ಸುರೇಶ ಹೆಚ್.ಎಂ., ಮನೋಹರ ಎಚ್. ವಾಲಗದ, ಅಲ್ತಾಪ್ ನದಾಫ್ ಅವರಿಗೆ ಗಂಧದಗುಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಆಗಲಿದೆ.

ಶಿಕ್ಷಣಸಿರಿ-ಆರ್ಯಭಟ ಕನ್ನಡ ರಾಜ್ಯೋತ್ಸವ ಪುರಸ್ಕೃತರು
ಬಸವರಾಜ ಎಸ್‌ ಬಾನರ್, ರೇವಣಪ್ಪ ಆರ್., ಡಾ.ಗದಿಗೆಪ್ಪ ಮ್ಯಾಚರ್, ರುದ್ರೇಶ ಬಿ., ರವಿ ಪಿ., ಹನುಮರಡ್ಡೇರ ಟಿ.ಎಚ್., ವಾಹೀದಾಬೇಗಂ, ಡಾ‌.ಸುರಯಾ ಎಂ.ನದಾಫ್, ಪ್ರಮೀಳಾದೇವಿ ಶಿವಪ್ಪ ಬ್ಯಾಳಿ, ವಿಜಯಾ ಸುಭಾಷ ಜಕರೆಡ್ಡಿ, ಪರವೀನತಾಜ್ ನಬೀಸಾಬ, ಅಲ್ಲಾಬಿ ಅಬ್ದುಲ್ ಗನಿ ಫಾರೂಖಿ, ರಾಜರಾಜೇಶ್ವರಿ ಮ್ಯಾಗೇರಿ, ಅಕ್ಕಮಹಾದೇವಿ ಮುನೇನಕೊಪ್ಪ, ದ್ರಾಕ್ಷಾಯಣಿ ಹಿರೇಮಠ, ಗೌರಮ್ಮ ಕಮತರ, ಶಕುಂತಲಾ ಬಂಡಿ, ಪುಂಡಲೀಕಪ್ಪ ಹುಗ್ಗಿ ಅವರಿಗೆ ಶಿಕ್ಷಣಸಿರಿ ಕನ್ನಡ ರಾಜ್ಯೋತ್ಸವ ರತ್ನಾ ಐರಸಂಗ, ಶಹನಾಜಬೇಗಂ ಮಹ್ಮದಗೌಸ ನೆಗಳೂರ ಅವರಿಗೆ ಆರ್ಯಭಟ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಚೇತನ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.

 

Author
B News Kannada
Ajjayya G
Editor | Badavara News Kannada Weekly Newspaper
B News Kannada Digital Media

Ajjayya G is associated with Kannada journalism and digital media, focusing on public-interest reporting, local news, social issues, government initiatives, and community awareness. Through his media work, he aims to highlight the concerns of ordinary people, bring public issues to light, and promote awareness through responsible journalism.

Editorial Tagline: Our Voice Against Injustice.

Website: www.bnewskannada.com
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬದುಕಿನುದ್ದಕ್ಕೂ ಸಂಕಷ್ಟಗಳೇ…ಬದುಕು ಬದಲಾಯಿಸಿದ ಲೇಖನಕನ್ನಡ ಕಸ್ತೂರಿ ಅಸ್ಮಿತೆಮದನ ಬಾವಿ ಸರ್ಕಾರಿ ಗೋಶಾಲೆಯ ದುರವಸ್ಥೆ ಖಂಡಿಸಿ ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ  ಜನಪ್ರಿಯಧಾರವಾಡದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇ-ಕೆವೈಸಿಗೆ ₹50 ಅಕ್ರಮ ವಸೂಲಿ ಆರೋಪ: ದೊಡ್ಡೇರಿ ನ್ಯಾಯಬೆಲೆ ಅಂಗಡಿಗೆ ನೋಟಿಸ್ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಯಾದ ​ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತುಜೇವರ್ಗಿ–ಯಡ್ರಾಮಿ ಭಾಗದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಚರ್ಚೆ: ಗಂಗಯ್ಯ ಗುತ್ತೇದಾರ್ ಹೆಸರು ಮುಂಚೂಣಿಯಲ್ಲಿಕನ್ನಡವೇ ನಮ್ಮ ಉಸಿರು, ಕನ್ನಡ ನಾಡೇ ನಮ್ಮ ಹೆಮ್ಮೆ!