Press ID & Credential Portal
Apply / Verify  ➔
Stories
Press ID
Login
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Districts Kalabuargi

ಜೇವರ್ಗಿಯಲ್ಲಿ ಕಳೆಗಟ್ಟಿದ ಶ್ರೀ ಮಹಾಲಕ್ಷ್ಮಿ (ಕಲ್ಕತ್ತಾ) ದೇವಿ ಜಾತ್ರಾ ಮಹೋತ್ಸವ

ಧರ್ಮಸಿಂಗ್ ಫೌಂಡೇಶನ್‌ನಿಂದ ಸಾವಿರಾರು ಭಕ್ತರಿಗೆ ಕರಿಗಡಬು–ತುಪ್ಪದ ಅನ್ನಪ್ರಸಾದ ಸೇವೆ

ಜೇವರ್ಗಿ: ಕಲ್ಯಾಣ ಕರ್ನಾಟಕದ ಸಗರನಾಡಿನ ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಜೇವರ್ಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮಿ (ಕಲ್ಕತ್ತಾ) ದೇವಿಯ ಜಾತ್ರಾ ಮಹೋತ್ಸವವು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಜರುಗುತ್ತಿದೆ.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವದ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಅಂಜುಮ್ ತಬಸುಮ್ ಅವರು ದೇವಿಯ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.

ಧರ್ಮಸಿಂಗ್ ಫೌಂಡೇಶನ್‌ನಿಂದ ಅನ್ನಪ್ರಸಾದ ಸೇವೆ

ಜಾತ್ರಾ ಮಹೋತ್ಸವದ ಅಂಗವಾಗಿ ಜೇವರ್ಗಿಯ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ವಿಶೇಷ ಅನ್ನಪ್ರಸಾದ ಸೇವೆ ಏರ್ಪಡಿಸಲಾಗಿತ್ತು. ಭಕ್ತಿಪೂರ್ವಕವಾಗಿ ಕರಿಗಡಬು ಮತ್ತು ತುಪ್ಪದ ಅನ್ನವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಫೌಂಡೇಶನ್‌ನ ಈ ಸೇವಾ ಕಾರ್ಯಕ್ಕೆ ಭಕ್ತಾದಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.

ರೈತರ ಸಂಕಷ್ಟ ನಿವಾರಣೆಗೆ ದೇವಿಯಲ್ಲಿ ಪ್ರಾರ್ಥನೆ

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಾ. ಅಜಯ್ ಸಿಂಗ್ ಅವರು, “ತಾಯಿಯ ಜಾತ್ರಾ ಮಹೋತ್ಸವವು ನಾಡಿನ ಏಕತೆ, ಸಾಮರಸ್ಯ ಮತ್ತು ಭಕ್ತಿಯ ಪ್ರತೀಕವಾಗಿದೆ. ಈ ಬಾರಿ ಎಲ್‌ನಿನೋ ಪ್ರಭಾವದಿಂದ ಬರಗಾಲದ ಸಂಕಷ್ಟ ಎದುರಿಸುತ್ತಿರುವ ನಮ್ಮ ಭಾಗದ ರೈತರಿಗೆ ದೇವಿಯ ಆಶೀರ್ವಾದ ದೊರೆಯಲಿ. ಎಲ್ಲರ ಬದುಕಿನಿಂದ ಸಂಕಷ್ಟಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶುಭ ಹಾರೈಸಿದರು.

ಗಣ್ಯರ ಉಪಸ್ಥಿತಿ

ಈ ಸೌಹಾರ್ದಯುತ ಪ್ರಸಾದ ಸೇವಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ರಾಜಶೇಖರ್ ಸಿರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಮ್ ಪಟೇಲ್ ಇಜೇರಿ, ಹಿರಿಯ ನಾಯಕರಾದ ಖಾಸಿಂ ಪಟೇಲ್ ಮುದಬಾಳ ಬಿ., ಯುವ ಮುಖಂಡರಾದ ಪ್ರತಾಪ್ ಕಟ್ಟಿ ಹಾಗೂ ಇಮ್ರಾನ್ ಕುಕನೂರ್ ಸೇರಿದಂತೆ ಹಲವು ಗಣ್ಯರು, ಪಕ್ಷದ ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

ಭಕ್ತಿ, ಸೇವೆ ಮತ್ತು ಸೌಹಾರ್ದದ ಸಂದೇಶ ಸಾರಿದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವವು ಸಗರನಾಡಿನಲ್ಲಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾಯಿತು.

ವರದಿ: ಮಕ್ತುಮ್ ಪಟೇಲ್ ಹಿಪ್ಪರಗಿ ಎಸ್.ಎನ್.

ಬಿ ನ್ಯೂಸ್ ಕನ್ನಡ 

Author
B News Kannada
Ajjayya G
Editor | Badavara News Kannada Weekly Newspaper
B News Kannada Digital Media

Ajjayya G is associated with Kannada journalism and digital media, focusing on public-interest reporting, local news, social issues, government initiatives, and community awareness. Through his media work, he aims to highlight the concerns of ordinary people, bring public issues to light, and promote awareness through responsible journalism.

Editorial Tagline: Our Voice Against Injustice.

Website: www.bnewskannada.com
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬದುಕಿನುದ್ದಕ್ಕೂ ಸಂಕಷ್ಟಗಳೇ…ಬದುಕು ಬದಲಾಯಿಸಿದ ಲೇಖನಕನ್ನಡ ಕಸ್ತೂರಿ ಅಸ್ಮಿತೆಮದನ ಬಾವಿ ಸರ್ಕಾರಿ ಗೋಶಾಲೆಯ ದುರವಸ್ಥೆ ಖಂಡಿಸಿ ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಿತಾರವು ಅತ್ಯಂತ  ಜನಪ್ರಿಯಧಾರವಾಡದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇ-ಕೆವೈಸಿಗೆ ₹50 ಅಕ್ರಮ ವಸೂಲಿ ಆರೋಪ: ದೊಡ್ಡೇರಿ ನ್ಯಾಯಬೆಲೆ ಅಂಗಡಿಗೆ ನೋಟಿಸ್ಕರ್ನಾಟಕ ಎಜುಕೇಶನ್ ಬೋರ್ಡಿನ ಅಂಗಸಂಸ್ಥೆಯಾದ ​ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತುಜೇವರ್ಗಿ–ಯಡ್ರಾಮಿ ಭಾಗದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಚರ್ಚೆ: ಗಂಗಯ್ಯ ಗುತ್ತೇದಾರ್ ಹೆಸರು ಮುಂಚೂಣಿಯಲ್ಲಿಕನ್ನಡವೇ ನಮ್ಮ ಉಸಿರು, ಕನ್ನಡ ನಾಡೇ ನಮ್ಮ ಹೆಮ್ಮೆ!